ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತ

ಕಂಠೀರವ ಸ್ಟುಡಿಯೋ ೧೯೬೬ರಲ್ಲಿ ಜಂಟಿ ಸ್ಟಾಕ್ ಸಂಸ್ಥೆಯಾಗಿ ೨೦ ಎಕರೆ ವಿಸ್ತೀರ್ಣ (೮೧,೦೦೦ ಮೀ) ಪ್ರದೇಶದಲ್ಲಿ ಕಾರ್ಯಾರಂಭ ಮಾಡಿತು. ಕರ್ನಾಟಕ ಸರ್ಕಾರದ ಶೇ ೭ರ ಷೇರ್ ನಿಂದ ಸ್ಟುಡಿಯೋ ಆರಂಭವಾಯಿತು.


ಕಂಠೀರವ ಸ್ಟುಡಿಯೋ, ಚಿರ್ತೊದ್ಯಮ ಮತ್ತು ಕಿರುತೆರೆ ಉದ್ಯಮಕ್ಕೆ ಸ್ಟುಡಿಯೋ ಒಳಾಂಗಣ ಮತ್ತು ಹೊರಾಂಗಣ ಚಿತ್ರೀಕರಣ ಸೌಲಭ್ಯವನ್ನು ಒದಗಿಸಿಕೊಡುತ್ತಿದೆ. ಕಾವೇರಿ, ಶಂಕರ್ ನಾಗ್, ಮಂಜೂಷ, ಗುಬ್ಬಿ ವೀರಣ್ಣ ಚಿರ್ರವೇದೆಕೆಗಲು ನಿರಂತರ ಸಿನಿ ಚಟುವಟಿಕೆಗಲ್ಲಿ ತೊಡಗಿಕೊಂಡಿವೆ.


ಕನ್ನಡ ಸಿನಿರಂಗದ ಪ್ರಖ್ಯಾತ ತಾರೆಯರಾದ ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಸುಂದರಕೃಷ್ಣ ಅರಸ್, ಶಂಕರ್ ನಾಗ್, ಬಾಲಕೃಷ್ಣ, ನರಸಿಂಹರಾಜು, ಕೆ. ಎಸ್. ಅಶ್ವತ್ಥ್, ಪಂಢರಿಬಾಯಿ, ಕಲ್ಪನಾ, ಮಂಜುಳ ಮೊದಲಾದವರಿಗೆ ಸ್ಟುಡಿಯೊಸ್ ಪ್ರಮುಖ ಕಾರ್ಯಕ್ಷೇತ್ರ.