#cap2 #cap1 #cap2 #cap1 #cap2 #cap1 #cap2 #cap1 #cap2 #cap1 #cap2 #cap1 #cap2 #cap1 #cap2
ಶ್ರೀ ಕಂಠೀರವ ಸ್ಟುಡಿಯೋಸ್ ಗೆ ಸ್ವಾಗತ www.kanteeravastudios.com.
ಶ್ರೀ ಕಂಠೀರವ ಸ್ಟುಡಿಯೋಸ್ ಗೆ ಸ್ವಾಗತ www.kanteeravastudios.com.

ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತ, ನಮ್ಮ ನಾಡಿನ ಪ್ರತಿಷ್ಠಿತ ಸಾರ್ವಜನಿಕ, ಸ್ಟುಡಿಯೋ ಎಂದು ಗುರುತಿಸಿಕೊಂಡಿದ್ದು, ಕನ್ನಡ ಚಿತ್ರೋದ್ಯಮ ಅದರಲ್ಲೂ ಕನ್ನಡ ಭಾಷಾ ಚಿತ್ರಗಳ ನಿರ್ಮಾಣದಲ್ಲಿ ಪ್ರಮುಖ ಸೇವೆ ಒದುಗಿಸಿಕೊಡುತಿದ್ದೆ. ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತವು ೧೯೬೬ ಮಾರ್ಚ್ ೧೮ ರಂದು ದಿವಂಗತ ಶ್ರೀ. ಗುಬ್ಬಿವೀರಣ್ಣ, ತಿಪಟೂರು ಎಸ್ . ಕರಿಬಸವಯ್ಯ , ಕೆ. ವಿ . ಶಂಕರೇಗೌಡ, ಅಂದಾನಪ್ಪ ದೊಡ್ಡಮೇಟಿ, ರತ್ನವರ್ಮ ಹೆಗಡೆ, ನಮ್ಮ ನಾಡಿನ ಏಕೀಕರಣ ರೂವಾರಿ ಎಸ್. ನಿಜಲಿಂಗಪ್ಪ, ಡಿ. ಕೆಂಪರಾಜ್ ಅರಸ್ ಅವರುಗಳ ಪ್ರೋತ್ಸಾಹ ಮತ್ತು ಸಹಕಾರದೊಂದಿಗೆ ಆರಂಭಗೊಂಡಿತು.


ಭಾರತದ ವಿವಿಧ ಭಾಷೆಗಳ ಚಿತ್ರ ನಿರ್ಮಾಪಕರು, ಭಾರತೀಯ ಸಿನಿಮಾ ಅಭಿವೃಧಿ ಮತ್ತು ಪ್ರಗತಿಯ ವರಿಷ್ಥರಾದ ಚಿತ್ರ ನಿರ್ಮಾತೃಗಳು ಸ್ಟುಡಿಯೋ ಪದ್ದತಿಯನ್ನು ೧೯೩೦ಕ್ಕೂ ಮುಂಚೆಯೇ ಪರಿಚಯಿಸಲು ಮುಂದಾದರು. ಇಂತಹ ಪರಿಕಲ್ಪನೆಯಲ್ಲಿ ಅರಳಿದ ಹೂವು ಶ್ರೀ ಕಂಠೀರವ ಸ್ಟುಡಿಯೋಸ್. ಇದು ನಮ್ಮ ರಾಷ್ಟ್ರದ ಹಳೆಯ ಮತ್ತು ಬೃಹತ್


ಸ್ಟುಡಿಯೋಗಳಲ್ಲಿ ಒಂದೆಂಬ ಹೆಗ್ಗಳಿಕೆ ಹೊಂದಿದೆ. ಜನಮನದಲ್ಲಿ 'ಸ್ಯಾಂಡಲ್ವುಡ್' ಎಂದೇ ಹೆಸರು ಪಡೆದಿರುವ ಕನ್ನಡ ಚಿತ್ರೋದ್ಯಮದ ಕ್ರಿಯಾಶೀಲತೆ, ಸೃಜನತೆಗೆ ಪೂರಕವಾಗಿ ಪುನಶ್ಚೇತನಗೊಳಿಸಿ ತನ್ಮೂಲಕ ಜನರ ಸೌಂದರ್ಯ ಪ್ರಜ್ಞೆ ಹಾಗು ಸೃಜನಾತ್ಮಕತೆ ಯನ್ನು ಅಭಿವೃಧಿಗೊಳಿಸುವ ಕೈಂಕರ್ಯವನ್ನು ಕಂಠೀರವ ಸ್ಟುಡಿಯೋಸ್ ಮಾಡಿಕೊಂಡು ಬರುತಿದ್ದೆ. ಕಂಠೀರವ ಸ್ಟುಡಿಯೋಸ್ ಕಾರ್ಯತ್ಮಕ ವಲಯ ವಿಶಾಲವಾಗಿದ್ದು ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ವಿನಿಮಯದ ಉತ್ತೇಜನಕ್ಕಾಗಿ ಬುಡಮಟ್ಟದಲ್ಲಿ ಸಾಮಾಜಿಕ-ಸಾಂಸ್ಕೃತಿಕ ಜಾಗೃತಿಯನ್ನುಂಟು ಮಾಡುತಿದ್ದೆ.


ಫೋಟೊಗಳು

ಫೇಸ್ಬುಕ್